ಚಂಚಲ

ಮನದ ಕುಲುಮೆಯಲೀಗ,
ಕಾದ ತಗಡಿನ ಕನಸು,
ಕೊರೆವ ಚಳಿಯಲೂ ಕೂಡ..
ಬಿಡದೆ ಸುಡುತಿದೆ ಮನಸು..

ಕಾದ ಸಮಯವ ಕಾದು,
ಹದವ ಮಾಡುವ ನೆಪದಿ,
ತಿದಿಯನೊತ್ತುವ ವಿಧಿಯ..
ತಡೆದು ಕೇಳುವರಾರು!?

ಹೊತ್ತು ಹೊತ್ತಿಗೆ, ಸುತ್ತ ಸುತ್ತಿಗೆ ಪೆಟ್ಟು,
ಮೀರಿದಾಸೆಗಳಿಗೆ,
ಸರಿ ಆಕಾರವಾ ಕೊಟ್ಟು,ಏನೇ ಆದರೂ ಕೂಡ ಬಿಡದೆ,
ಹಿಡಿದ ಪಟ್ಟು, ಹಟವ ಮಾಡುವ ಮನವ
ತಡೆದು ಹಿಡಿಯುವುದೆಂತು !?

___________________________________________________________
ಏಪ್ರಿಲ್, 2008

Comments

Popular posts from this blog

ಸ್ವಾಭಿಮಾನ

ಗಡಿಯಾರ-ಜೀವನಯಾನ

ಬವಣೆ