ಗಡಿಯಾರ-ಜೀವನಯಾನ




ಗಡಿಯಾರ-ಜೀವನಯಾನ
---------

ಬಿಡುವಿರದೆ, ಎಡೆಬಿಡದೆ
ಉರುಳುತಿಹೆ ಎಂದೆಂದೂ
ಎಲ್ಲಿಗೆಂದು ಕೇಳ್ವೊಡೆ,
ತಿಳಿದಿಲ್ಲ ಹಿಂದು-ಮುಂದು!

ದಾಟಿ ದಾಟಿ ಅಂಕೆಗಳ
ಮೈಲಿಗಲ್ಲು,
ಗಮ್ಯ ತಲುಪಿದೆನೆಂದು
ಹಿಗ್ಗಿತು ನಿಮಿಷದ ಮುಳ್ಳು!
ಇಂತಾವೆ ಸುತ್ತು,
ಸಾವಿರವೇ ಆತು,
ಮುಗಿಯದ ಪಯಣವಿದೆಂದು
ಗೊಳ್ಳೆಂದಿತು ಕ್ಷಣದ ಮುಳ್ಳು.

ಸರಿ ಸಾಕಿನ್ನು
ಗುರಿ ತಲುಪುವ ಭ್ರಮೆ.
ಸವಿಯುವೆನು
ಸಂಚಾರದಲಿರುವ ನಲುಮೆ.
ನಿಂತು ನಿಂತು ಬೆಳೆಸಿದೆ
ಸಂಕೆಮಿತ್ರರ ಒಡನಾಟ.
ಬದುಕಿನಲಿ ಇನ್ನಿಲ್ಲ
ಏಕತಾನತೆ ಕಾಟ.

ಕೇಳು ನೀ ಮನುಜ,
ಬದುಕೊಂದು
ತೆವಳುವ ಗಡಿಯಾರ.
ಗುರಿಯಿರದ ಕಡೆಗೆಲ್ಲೋ
ಮುಗಿಯದ ಸಂಚಾರ.
ಜೀವನಯಾನದಲಿ
ತುಂಬಿರಲಿ ಸಹಚರರು
ಪ್ರೀತಿ ಹಂಚುತ ಸಾಗು,
ಕಡೆಯ ನಿಲ್ದಾಣ
ಬರುವುದೆಂದೋ ಬಲ್ಲವರು
ಯಾರು?

====
ಚುಟುಕು

--------
ಜಗವೆಲ್ಲಾ ಒಂದು
ಗಡಿಯಾರದಂಗಡಿ
ಜನರೆಲ್ಲಾ ಇದ್ದಂತೆ
ಒಂದೊಂದು ಘಡಿ

ಮಿಡಿವ ಹೃದಯವೇ
ನಿಮಿಷದ ಮುಳ್ಳು.
ಬಡಿತ ನಿಂತರೆ
ಬದಲಾಯಿಸಲು ಇಲ್ಲ
ಯಾವುದೇ ಸೆಲ್ಲು!!

ಸೆಲ್ಲು=battery
========

 ಗಡಿಯಾರದಳಲು.
(ಅಪೂರ್ಣ.. )
-------
ಜಗವೆಲ್ಲಾ ಮಲಗಿದರೂ
ನನಗಿಲ್ಲ ಬಿಡುವು
ಹಗಲಿರಲಿ ಇರುಳಿರಲಿ
ನಾನೀಜೋ, ನದಿಗಿಲ್ಲ ದಡವು!!

ಕಣ್ಣಿಗೆಣ್ಣೆಯ ಹಾಕಿ
ತಿರುಗುವೆ ನಾ ಗಸ್ತು.
ಸೌಜನ್ಯಕ್ಕಾದರೂ ಕೇಳಬಾರದೆ
ನಿನಗಾಯಿತಾ ಸುಸ್ತು?

ನಸುಕಿನಲಿ ನಾ ಕೂಗಿ
ಕರೆದೊಡೆ ಆಣತಿಯಂತೆ.
ತಲೆಗೊಂದು ಬಡಿದು
ಮಗ್ಗುಲು ಬದಲಿಸುವರು
ನಾ ಯಾರೋ,
ತಿಳಿದೇ ಇಲ್ಲದಂತೆ!
Attachments area

Comments

Popular posts from this blog

ಸ್ವಾಭಿಮಾನ

ಬವಣೆ