Posts

Showing posts from August, 2017

ನೀಲಕಂಠನ ರಂಗಿನ ರಹಸ್ಯ

Image
ನೀಲಗಗನದ ಮೇಲೆ ತೇಲುತಿಹ ಖಗವೇ. ಬೇಗ ಹೇಳೇಲೆ ನೀ ರ೦ಗು ಪಡೆದ ಬಗೆಯೇ? ನೀಲಸಾಗರದಲಿ ಮುಳುಗಿ ಎದ್ದ ಜಲವೇ? ನೀಲ ಗಿರಿಗಳ ಮೇಲೆ ಹಾದು ಹೋದ ಫಲವೇ? ನೀಲಾಕಾಶದೊಡನಿ ರುವ ನಿನ್ನೊಡನಾಟದ ಗುರುತೇ? ನೀಲ ಮೇಘ ಶ್ಯಾಮ ಮೈದಡವಿ ತೋರಿದನೆ ಮಮತೆ? ಸಾಕು ನಿಲಿಸುವೆ ಇನ್ನು ನಿನ್ನ ಬಣ್ಣದೊಡವೆಯ ಹಿ೦ದಿರುವ ಒಗಟ ಬಿಡಿಸುವ ಗೊಡವೆ ಸೊಬಗ ಸವಿವುದ ಬಿಟ್ಟು ಮೂಲ ಹುಡುಕಿ ನಾ ಏನ ಪಡೆವೆ!? ಎ೦ಬ ಸತ್ಯವು ಅರಿವಾದುದು ಸ್ವಲ್ಪ ಆಯಿತು ತಡವೆ! ---------------------------- ಆಗಸ್ಟ್ ೨, ೨೦೧೭ Attachments area

ನಗೆಮುಗುಳು

Image
ಅ೦ದೇ ಅರಳಿ ಅ೦ದೇ ಬಾಡುವ ಒಂದೇ ದಿನದ,  ಕ್ಷಣಿಕ ಈ ಬಾಳು. ಆದರೂ  ನಕ್ಕು, ನಳನಳಿಸುತಿವೆ ನೋಡಿ ಹೂಗಳು. ನಗುವೊoದೇ ಅ೦ತೆ ಔಷಧ  ಎಲ್ಲಾ ನೋವ ಮರೆಯಲು. ಇದನರಿತ೦ತಿದೆ ಹೂವೊಡತಿ ಆಹಾ.. ಅದೆಷ್ಟು ಹೊಳಪು ಆ ಕ೦ಗಳು.. ಆ ನಗೆ ಮುಗುಳು!! ---------- ಜುಲೈ ೨೦೧೭

ಸೈನಿಕರ ತ್ಯಾಗ

Image
ದೇಶಕ್ಕಾಗಿ ಪ್ರಾಣ ತೆತ್ತ ಸೈನಿಕರೇ ಓಹ್, ಇದೇನು ನಿಮ್ಮ ಈ ಬದುಕು. ತಾನೇ ಉರಿದು ಕರಗುವ ಮೊಂಬತ್ತಿಯ ಹಾಗೆ, ಜಗಕೆಲ್ಲಾ ಕೊಡುತ್ತಾ ಬೆಳಕು.. ಹೆತ್ತ ತಾಯಿಯ ಋಣಕ್ಕಿಂತ ಇಲ್ಲ ಮಿಗಿಲು ಎಂದರು, ದೊಡ್ಡವರು. ಏಕೋ ಅನಿಸುತಿದೆ ಇಂದು ನಿಮ್ಮ ತ್ಯಾಗ ಅದಕ್ಕಿಂತ ಹೆಚ್ಚೆಂದು, ನೀವು.. ತಾಯ್ನಾಡಿಗಾಗಿ ಮಡಿವವರು!! --------- ಜೂನ್ ೨೦೧೭

ಸರ್ಪ-ದರ್ಪ

Image
ಇರಲಿ ತೋರಿಸೋಣ ಅಂತ ಸ್ವಲ್ಪ ದರ್ಪ.. ಹಾಕಿಸಿದೆ ಗಾಡಿಯ ಹಿಂಭಾಗ ಸರ್ಪ.. ಇರಲಿಲ್ಲ ಯಾವುದೇ ಉದ್ದೇಶ ಕೊಡಬೇಕು ಅಂತ ಸಂದೇಶ ಆದ್ರೂ ಗೊತ್ತಿಲ್ದೆ, ಹೇಳ್ತಾ ಇದೆ.. ಹಾವು ಕಕ್ಕೋದು, ಗಾಡಿ ಉಗಿಯೋದು ಎರಡೂ ವಿಷ, ವಿಷ!!!  --------------- ಜೂನ್ ೨೦೧೭

ಮತ್ತೆ ಜಿನುಗುತಿದೆ ಕವನ

Image
ನಾನು ಇತ್ತೀಚಿಗೆ ಒಂದು ವಾಟ್ಸ್ಯಾಪ್ ಸಾಹಿತ್ಯಾಸಕ್ತರ ಬಳಗಕ್ಕೆ ಸೇರಿದೆ. ಆ ಬಳಗ ತುಂಬಾ ಪ್ರತಿಬಾವಂತರಿಂದ ಕೂಡಿದ್ದು ನನ್ನ ಕವನ ಬರೆಯೊ ಆಸ್ತೆಗೆ ಮತ್ತೆ ಜೀವ ಕೊಟ್ಟಿದೆ. ಆ ಗುಂಪಿನಲ್ಲಿ ವಾರಕ್ಕೊಂದು ಚಿತ್ರದ ಮೇಲೆ ಕವನ ಬರೆಯೋ ಸ್ಪರ್ದೆ ನಡೆಸುತ್ತಾರೆ. ಅದರ ಫಲವಾಗಿ ನಾ ಕವನಗಳನ್ನು ಬರೆಯೋಕೆ ಶುರು ಮಾಡಿದೆ. ಅದನ್ನು ಇಲ್ಲಿ ಹಂಚಿಕೊಳ್ಳೊವುದರ ಮುಖಾಂತರ ಈ ಬ್ಲಾಗಿಗೆ ಮತ್ತೆ ಜೀವ ಬಂದಿದೆ. ದಯವಿಟ್ಟು ಓದಿ ಪ್ರತಿಕ್ರಿಯಿಸಿ. ಹರೆಯದ ಹುಡುಗರು ಎಲ್ಲಾ ನಾಚಿ ನಿಂತರೂ ನೋಡಿ, ನರೆಯ ನೆರಿಗೆಗಳ್ಳೆಲ್ಲಾ ನಿಮಗಾವ ಲೆಕ್ಕ ಬಿಡಿ. ಬದುಕಿನೆಡೆಗೆ ಇರುವ, ನಿಮ್ಮ ಈ ಒಲುಮೆ ಹಿಮತಟದ ನದಿಯಂತೆ ಎಂದೂ ಬತ್ತದ ಚಿಲುಮೆ!! ದಿನವೂ ಹೊಸತನ.. ಇದ್ರೆ ಎಂದೂ..ಜೀವನ ಅರಿತೆವು ನಾವಿಂದು, ಮನಸಿಗೆಂದಿಗೂ ಬಾರದು ಮುದಿತನ!! --------------- ಜೂನ್ ೨೦೧೭