ನೆನೆ

ಏಕೋ, ಹೇಗೋ
ತೊಯ್ದ ಅನುಭವ..

ಒಮ್ಮೆ ಪನ್ನೀರ
ಚುಮುಕಿಸಿದಂತೆ
ಸಿಂಚನ..

ಮತ್ತೊಮ್ಮೆ
ಚಟಪಟ
ನೀರ ನರ್ತನ.

ಕೆಲವು ಬಾರಿಯಂತೂ,
ಧುಮ್ಮಿಕ್ಕುವ ಜಲಪಾತದಡಿಯ
ಭೋರ್ಗರೆತದ ಸ್ನಾನ.

ಮಳೆಯ ಸುಳಿವಿಲ್ಲದಿದ್ದರೂ
ನಡೆದುದ್ದಿದೆ ಕೊಡೆ ಹಿಡಿದು,

ಬಿಸಿಲ ಝಳದಲೂ
ಧರಿಸಿದ್ದಿದೆ ಮಳೆಕೋಟನು!

ಅರಿತಿದ್ದು ತಡವಾಯಿತೋ
ಏನೋ?
ನೆನೆದದ್ದು
ನೆನಪಧಾರೆಯಲ್ಲೆಂದು!
ಮೇಘ ಕರಗಿ
ನೀರಾಗುವ
ಪ್ರಕ್ರಿಯೆಯಿಂದಲ್ಲವೆಂದು!!!


7/13/2019

Comments

Popular posts from this blog

ಸ್ವಾಭಿಮಾನ

ಗಡಿಯಾರ-ಜೀವನಯಾನ

ಪಗಡೆ