ಬವಣೆ
ಮ್ಯಾಲ್ಯಾಕೆ ಕುಂತೆ ಸಿವನೆ ? ತೋರಲೆಂದೆ ಬದುಕೊಂದು ಬವಣೆ ? ಸಾಗಬೇಕು ಒಂದೇ ಸಮನೆ, ಗುರಿ ಕಡೆಗೆ ಕೆಡದಂತೆ ಸಹನೆ ।ಪ। ಎಷ್ಟಿದ್ದರೇನು ದೂರ, ನಿನ್ನ ಕಾಣೋ ಖುಷಿಯೇ ಮಧುರ. ಹೊರಲಾರದಂತ ಭಾರ, ನಿನ್ನ ಜಪದಿ ಎಲ್ಲವೂ ಹಗುರ. ।೧। ನಿನ್ನ ಕಾಣಲೆಂಬ ಹಠಕೆ.. ಮೇರು ಗಿರಿಯೂ ಹುಲ್ಲ ಗರಿಕೆ. ನೆತ್ತಿ ಸುಡುವ ಬಿಸಿಲ ಝಳಕೆ, ಭಕ್ತಿಬೆವರ ತಂಪಿನ ಹೊದಿಕೆ ।೨। November 2017