ನೀಲಕಂಠನ ರಂಗಿನ ರಹಸ್ಯ



ನೀಲಗಗನದ
ಮೇಲೆ
ತೇಲುತಿಹ
ಖಗವೇ.
ಬೇಗ ಹೇಳೇಲೆ
ನೀ ರ೦ಗು
ಪಡೆದ
ಬಗೆಯೇ?

ನೀಲಸಾಗರದಲಿ
ಮುಳುಗಿ ಎದ್ದ
ಜಲವೇ?
ನೀಲ ಗಿರಿಗಳ
ಮೇಲೆ
ಹಾದು ಹೋದ
ಫಲವೇ?

ನೀಲಾಕಾಶದೊಡನಿ
ರುವ ನಿನ್ನೊಡನಾಟದ
ಗುರುತೇ?
ನೀಲ ಮೇಘ ಶ್ಯಾಮ
ಮೈದಡವಿ
ತೋರಿದನೆ
ಮಮತೆ?

ಸಾಕು
ನಿಲಿಸುವೆ ಇನ್ನು
ನಿನ್ನ ಬಣ್ಣದೊಡವೆಯ
ಹಿ೦ದಿರುವ ಒಗಟ
ಬಿಡಿಸುವ
ಗೊಡವೆ

ಸೊಬಗ
ಸವಿವುದ ಬಿಟ್ಟು
ಮೂಲ ಹುಡುಕಿ
ನಾ ಏನ ಪಡೆವೆ!?
ಎ೦ಬ ಸತ್ಯವು
ಅರಿವಾದುದು
ಸ್ವಲ್ಪ ಆಯಿತು
ತಡವೆ!

----------------------------

ಆಗಸ್ಟ್ ೨, ೨೦೧೭
Attachments area

Comments

Popular posts from this blog

ಗಡಿಯಾರ-ಜೀವನಯಾನ

ಸ್ವಾಭಿಮಾನ

ಬವಣೆ