ಮತ್ತೆ ಜಿನುಗುತಿದೆ ಕವನ
ನಾನು ಇತ್ತೀಚಿಗೆ ಒಂದು ವಾಟ್ಸ್ಯಾಪ್ ಸಾಹಿತ್ಯಾಸಕ್ತರ ಬಳಗಕ್ಕೆ ಸೇರಿದೆ. ಆ ಬಳಗ ತುಂಬಾ ಪ್ರತಿಬಾವಂತರಿಂದ ಕೂಡಿದ್ದು ನನ್ನ ಕವನ ಬರೆಯೊ ಆಸ್ತೆಗೆ ಮತ್ತೆ ಜೀವ ಕೊಟ್ಟಿದೆ.
ಆ ಗುಂಪಿನಲ್ಲಿ ವಾರಕ್ಕೊಂದು ಚಿತ್ರದ ಮೇಲೆ ಕವನ ಬರೆಯೋ ಸ್ಪರ್ದೆ ನಡೆಸುತ್ತಾರೆ. ಅದರ ಫಲವಾಗಿ ನಾ ಕವನಗಳನ್ನು ಬರೆಯೋಕೆ ಶುರು ಮಾಡಿದೆ.
ಅದನ್ನು ಇಲ್ಲಿ ಹಂಚಿಕೊಳ್ಳೊವುದರ ಮುಖಾಂತರ ಈ ಬ್ಲಾಗಿಗೆ ಮತ್ತೆ ಜೀವ ಬಂದಿದೆ. ದಯವಿಟ್ಟು ಓದಿ ಪ್ರತಿಕ್ರಿಯಿಸಿ.
ಹರೆಯದ ಹುಡುಗರು ಎಲ್ಲಾ
ನಾಚಿ ನಿಂತರೂ ನೋಡಿ,
ನರೆಯ ನೆರಿಗೆಗಳ್ಳೆಲ್ಲಾ
ನಿಮಗಾವ ಲೆಕ್ಕ ಬಿಡಿ.
ಬದುಕಿನೆಡೆಗೆ ಇರುವ,
ನಿಮ್ಮ ಈ ಒಲುಮೆ
ಹಿಮತಟದ ನದಿಯಂತೆ
ಎಂದೂ ಬತ್ತದ ಚಿಲುಮೆ!!
ದಿನವೂ ಹೊಸತನ..
ಇದ್ರೆ ಎಂದೂ..ಜೀವನ
ಅರಿತೆವು ನಾವಿಂದು, ಮನಸಿಗೆಂದಿಗೂ
ಬಾರದು ಮುದಿತನ!!
---------------
ಜೂನ್ ೨೦೧೭
Comments
Post a Comment