ಅಂತ್ಯ
ಮಾತು ಮುಗಿದಿರಲಿಲ್ಲ
ಮೌನ ಕವಿಯಿತು.., ಮೆಲ್ಲ!
ಭಾವ ಮೂಡಿರಲಿಲ್ಲ
ಪದಗಳುಳಿದಿರಲಿಲ್ಲ!
ಹೊತ್ತಲ್ಲದ ಹೊತ್ತಿನಲ್ಲಿ ಧುತ್ತೆನ್ನೆದ್ದು
ದಿಟ್ಟಿಸ್ಸಿದ್ದೆಷ್ಟು? - ಎಲ್ಲವೂ ಬರೀ ಶೂನ್ಯ!
ನೆನಪಿನ ಮಳೆಯಲ್ಲಿ ಬಿಕ್ಕಿ ಬಿಕ್ಕಿ
ನೆನೆದದ್ದೆಷ್ಟು? - ಅದು ಖಾಸಗಿ ವಿಷಯ!
ಅಂತ್ಯವೆಂಬುದೇ ಹೀಗೆ,
ಬರುವುದು ಒಮ್ಮೆಲೇ
ನೀಡದೆ ಆಮಂತ್ರಣ.
ನೀನಿರದ ಜೀವನವೇ
ಆಗಿರಲು ಅಪೂರ್ಣ..
ಹೇಗೆ ತಾನೇ ಮುಗಿವುದಿನ್ನು
ಈ ಕವನ!
Comments
Post a Comment