ಪಗಡೆ






ಸಾಗಲೇ ಬೇಕು ನಿನ್ನ ನಡೆ.
ಇದ್ದರೂ ನೂರಾರು ಅಡೆ-ತಡೆ.
ಅರೆಕ್ಷಣ ಕಣ್ಮುಚ್ಚಿ, ಮರೆತೊಡೆ..
ಅಷ್ಠ ದಿಕ್ಕಲ್ಲೂ  ಶತ್ರುಪಡೆ.

ಸುತ್ತಾಮುತ್ತಾ, ಎಲ್ಲಾ ಕಡೆ
ಪ್ರೇಮಾನೇ ಇದ್ರೆ, ಯಾಕ್ಬೇಕ್ ಗೋಡೆ?
ನಿಲ್ಲದ ಜೀವನದಾಟವಿದು..
ಎಂದೂ ಇಲ್ಲ, ಬಿಡುಗಡೆ

ಯಾರನೋ ತಡೆಯುವ ಯತ್ನದಲಿ
ಮುಚ್ಚದಿರು ನೀ, ನಿನ್ನಯ ಗೂಡೆ!
ಏಣಿಯ ಹತ್ತುವ ತವಕದಲಿ
ತುಳಿಯದಿರು ನೀ ಹಾವ ಹೆಡೆ.

ಕಾಯದ ಕಾಯಿಯ ಹಣ್ಣು
ಮಾಡಿಸೋ ಬದುಕೇ ಈ ಪಗಡೆ.
ಕಾಯಿಯ ಮುನ್ನಡೆ, ಹೇಗೋ? ಏನೋ?
ನಿನ್ನಯ ಕೈಲಿಲ್ಲ, ಆ ಕವಡೆ





March 2018

Comments

Popular posts from this blog

ಸ್ವಾಭಿಮಾನ

ಗಡಿಯಾರ-ಜೀವನಯಾನ