ವೇಷ





ಹೊಸದೇನನ್ನೋ ಬರೆಯಬೇಕೆಂಬ 
ತುಡಿತದಿಂದ ಬರೆದಿದ್ದು ಈ ಸಾಲುಗಳು.
ಯಾವುದೇ ಭಕ್ತಿ-ಭಾವಗಳಿಗೆ ಧಕ್ಕೆ ಗೊಳಿಸುವ
ಉದ್ದೇಶ ಖಂಡಿತ ಇಲ್ಲ
-------

ಗಂಗಾಧರನಿಗೆತ್ತೆನೋ
ಭೀತಿ
ಜಟೆಯ ತೆರೆದೆಡೆ,
ಓಡಿಬಿಡುವಳೆಂದು
ಕಿರಿಪತ್ನಿ

ಚಂದ್ರಶೇಖರನಿಗಿ
-ದ್ದಿರಬಹುದು ಆತಂಕ
ಶಶಿಯ  ಕೆಳಗಿಳಿಸಿದರೆ,
ಕೊಡುವರಾರೆಂದು ಧರೆಗೆ,
ಇರುಳ ಬೆಳಕ!

ಹೀಗೆ ಏನಿತ್ತೋ
ಆತನಿಗೆ ಸಾಸಿರ
ಬಿಕ್ಕಟ್ಟು.
ಅದೇ ಚಿಂತೆಯಲಿ
ಗಮನ ಕೊಡದೆ 
ಜಡ್ಡುಗಟ್ಟಿತೊ ಜುಟ್ಟು.

ಅವನ ವೇಷ
ಅವಗೆ ಬಿಟ್ಟು 
ತಿಳಿವುದೊಳಿತೇನೋ
ಶಿವನಾಂತರ್ಯದ
ಗುಟ್ಟು 

ವೇಷದ
ಅನುಕರಣೆಯಿಂದೊಂದೇ
ಆಗದು
ಶಿವಸಾಕ್ಷಾತ್ಕಾರ.
ಕೃತಿಯಲ್ಲಿ , ಕರ್ಮದಲಿ
ಇರಲಿ ನಿಷ್ಠೆ, ಎಲ್ಲೆಲ್ಲೂ 
ಇರುವನವನೇ 
ನಿರಾಕಾರ

Comments

Popular posts from this blog

ಸ್ವಾಭಿಮಾನ

ಗಡಿಯಾರ-ಜೀವನಯಾನ

ಪಗಡೆ