ಇನ್ನಾದರೂ ಸೋಲು.. ಇಷ್ಟೆಲ್ಲಾ ಆದ ಮೇಲೂ.. ಬಂದ ಭಾವನೆಗಳಿಗೆ ಬೇಲಿ ಹಾಕಿ ಬಂಧಿಸಿದಾದ ಮೇಲೂ .. ಆಸರೆಗಾಗಿ ತಡಕಾಡುತಿದ್ದ ಕರಗಳಾ.. ಕಟ್ಟಿ ಹಾಕಿದ ಮೇಲೂ... ಸಜ್ಜನರಿಗಾದರೂ ಬಾಗಬೆಕಿದ್ದ ಶಿರವ.. ಧಿಕ್ಕರಿಸಿ ಮೆರೆವಂತೆ ಮಾಡಿದ ಮೇಲೂ.. ಒತ್ತರಿಸಿ ಬಂದ ಕಂಬನಿಯಾ.. ಕಣ್ಣೆವೆಗಳ ತೇವಕ್ಕೆ ಮಾತ್ರ, ಮೀಸಲಾಗಿಸಿದ ಮೇಲೂ.. ಇನ್ನಾದರೂ ಬಿಡುವೆಯ ನನ್ನ.. ಒಮ್ಮೆ ಮನತುಂಬಿ ನಿರರ್ಗಳವಾಗಿ ಅಳಲು... ಇನ್ನಾದರೂ ಸೋಲು ನೀ ಮನವೇ.. ಇಷ್ಟೆಲ್ಲಾ.. ಆದ ಮೇಲೂ.. ___________________________________________________________ ೧೩ ಅಕ್ಟೋಬರ್, ೨೦೦೭
ಅಂತ್ಯ ಮಾತು ಮುಗಿದಿರಲಿಲ್ಲ ಮೌನ ಕವಿಯಿತು.., ಮೆಲ್ಲ! ಭಾವ ಮೂಡಿರಲಿಲ್ಲ ಪದಗಳುಳಿದಿರಲಿಲ್ಲ! ಹೊತ್ತಲ್ಲದ ಹೊತ್ತಿನಲ್ಲಿ ಧುತ್ತೆನ್ನೆದ್ದು ದಿಟ್ಟಿಸ್ಸಿದ್ದೆಷ್ಟು? - ಎಲ್ಲವೂ ಬರೀ ಶೂನ್ಯ! ನೆನಪಿನ ಮಳೆಯಲ್ಲಿ ಬಿಕ್ಕಿ ಬಿಕ್ಕಿ ನೆನೆದದ್ದೆಷ್ಟು? - ಅದು ಖಾಸಗಿ ವಿಷಯ! ಅಂತ್ಯವೆಂಬುದೇ ಹೀಗೆ, ಬರುವುದು ಒಮ್ಮೆಲೇ ನೀಡದೆ ಆಮಂತ್ರಣ. ನೀನಿರದ ಜೀವನವೇ ಆಗಿರಲು ಅಪೂರ್ಣ.. ಹೇಗೆ ತಾನೇ ಮುಗಿವುದಿನ್ನು ಈ ಕವನ!
Comments
Post a Comment